tiraskara

tiraskara
ella ide balasalu anumathi illa

Wednesday, August 11, 2010

ಕಂಬನಿ
ಹಸಿರೆಲೆಯ ತುದಿಯಲ್ಲಿ ಭಾವಭಾರದಿ
ಕೂತ ನಾನು ಮಂಜಿನ ಕಂಬನಿ
ಅವಳು ಪ್ರೇಮ ದಾಹದ ಸಹೃದಯಿ ಭೂಮಿ
ಪ್ರತಿಸ್ಪಂದನೆ ಪ್ರಕೃತಿ ಪ್ರೇಮ ಕಾವ್ಯ .
ತಿರಸ್ಕೃತ

Wednesday, July 21, 2010

ಕೀವು ರಕ್ತ

ನಗುತ್ತಾಳೆ ನನ್ನ ನೆನಪ ಗಾಯ ಟಿಸಿಲೊಡೆದು
ಕನಸುಗಳ ರಕ್ತ ಕೀವು ಸೋರುತ್ತದೆ
ಯಮಯಾತನೆ ಸುಖ
ತಿರುಗಿ ನೋಡದೆ ಹೋಗುತ್ತಾಳೆ
ಎದೆ ಮರುಭೂಮಿಯಂತಾಗುತ್ತದೆ
ಮತ್ತೆ ಗಾಯ ಮಾಗುತ್ತದೆ
ಅವಳ ನಗುವಿನ ವಸಂತಕ್ಕಾಗಿ ಅಷ್ಟೇ

ತಿರಸ್ಕೃತ

ಏಕಾಂಗಿ

ನನ್ನ ಎದೆ ಪ್ರೀತಿಯ ಸೂತಕದ ಮನೆ
ಅವಳಿಲ್ಲ ಅಲ್ಲಿರುವುದು
ನಾನೊಬ್ಬನೇ ಬಿಕ್ಕಳಿಸಿ
ಅಳುತ್ತಿರುವ ಏಕಾಂಗಿ

ತಿರಸ್ಕೃತ

ಪ್ರೇಮ ಪತ್ರ

ನನ್ನ ನೋವಿನ ಮಹಾಸಾಗರದಲ್ಲಿ
ಮೋಜಿನ ಹಡಗು ಏರಿದ್ದಾಳೆ ಅವಳು
ನನ್ನೆಲ್ಲ ಪ್ರೇಮ ಪತ್ರ
ಅ ಹಡಗಿನ ಭಾವುಟಗಳು

ತಿರಸ್ಕೃತ

ಹಿಮರಾಣಿ

ಅವಳಿಲ್ಲ ನನ್ನೊಂದಿಗೆ ಪ್ರೇಮದೆದೆ ಕಾದಿದೆ
ಅಹೋರಾತ್ರಿ ಮಳೆಗರೆದರು
ಭಾವಸುಮವರಳಿದರು ಆರದು
ಸ್ವಪ್ನ ಜ್ವಾಲೆ
ಆದರೂ ಅವಳು ಹಿಮರಾಣಿ

ತಿರಸ್ಕೃತ

ಕಣ್ಣೀರು

ಅತ್ತರೆ ಕಣ್ಣೀರಾಗಿ ಸ್ರವಿಸುವಳು
ನೊಂದರೆ ನೋವಾಗಿ ಖಾಲಿಯಾಗುವಳು
ನೆನಪ ಶಿಖರದ ಮೇಲೆ ಸ್ವಪ್ನದ ಗೊಡಿದೆ
ಅದರಲಿ ಮೌನ ಪ್ರೇಮದ ಧ್ಯಾನವಿದೆ
ತಿರಸ್ಕೃತ

ಸ್ತ್ರೀ

ನನಗೆಲ್ಲಿ ಸ್ವಾತಂತ್ರ್ಯ?
ಸ್ವೇಚ್ಛಾ ಸ್ತ್ರೀ ಯಜ್ಞಕ್ಕಾಗಿ ಹಪಹಪಿಸುವ
ನನ್ನನು ಬಂದಿಸಿದ್ದಾಳೆ
ಅ ಸ್ವಪ್ನ ಚಾರಿಣಿ

ತಿರಸ್ಕೃತ

Tuesday, July 20, 2010

ಜನ್ಮ

ಯುದ್ಧ ಭೂಮಿಯೇ ಒಡಲು,ಮಿಕ್ಕವರಿಗದು ರುದ್ರ ಭೂಮಿ
ನಾನು ಅವರೊಟ್ಟಿಗಿನ ಹೋರಾಟದ ರಕ್ತ ಸಿಕ್ತ ಕುರುಹು
ಕಾಲನ ಪರಿಧಿಯ ಮುಳ್ಳು ತಂತಿಯ ಬೇಲಿ

ಉಸಿರು ಕಟ್ಟಿಸುವ ನನ್ನವರ ಸತ್ತ ದೇಹದ ಮಲೆತ ರಕ್ತ
ಮತ್ತೆ ನನ್ನದೇ ಮಲ ಮೂತ್ರದ ಗಬ್ಬುನಾತ
ಆದರೂ ಅವಳು ಕಾಯುತ್ತಾಳೆ ಮೃದ್ವಂಗಿ ಮುತ್ತು


ತಿರಸ್ಕೃತ

ತಿರಸ್ಕೃತ

ಅವಳ ಹಾದಿಯ ಹಳೆಯ ಪಯಣಿಗ
ಬೆನ್ನುಡಿಯ ಓದುಗ
ನೆನಪುಗಳ ದಾಳಿಗೆ ಸಿಕ್ಕ ತರಗೆಲೆ
ಕೊನೆಗೂ ಮುನ್ನುಡಿ ಓದಲು ಆಗದವನು

ತಿರಸ್ಕೃತ
ಅದೊಂದು ಆಲದ ಮರ ,
ಹೊರಗಡೆ ಬಣ ಬಣ ಬಿಸಿಲು ,
ನನ್ನ ಪಕ್ಕದಲ್ಲಿ ಅಜ್ಜನಿದ್ದಾನೆ ,ಮುಖ ,ಬಟ್ಟೆ,ಮನಸು ಮಾಸಿದೆ
ಘಮ್ಮನೆ ವಾಸನೆ ಆಲದ ಮರದಂತೆ
ಅನತಿ ದೊರದಲ್ಲಿ ತಾಯಿ ಮಗುವಿಗೆ ಹಾಲು ಉಣ್ಣಿಸುತ್ತಿದ್ದಾಳೆ
ಕುರುಡಿ ಒಬ್ಬಳು ಹಾಡುತ್ತಿದ್ದಾಳೆ ಮರದ ಮೇಲಿನ ಕೋಗಿಲೆ ಜೊತೆಗೆ
ಮರದ ಹಿಂದೆ ದಂಪತಿಗಳಿಬ್ಬರು ಮಾತಾಡುತಿದ್ದಾರೆ
ಎಲೆ ಉದುರುತ್ತಿವೆ
ಅಜ್ಜನನ್ನು ಕೇಳುತೇನೆ "ಯಾಕೆ ಎಲೆ ಉದುರುತ್ತವೆ ಟೊಂಗೆ ಜೊತೆ ?"
ಅಜ್ಜ ತನ್ನ  ನೆರೆದ ಕೊದಲು,ಸುಕ್ಕು ಗಟಿದ ಮುಖವನ್ನು ಕೈಯಿಂದ ತೋರಿಸುತ ಆಗಸದತ್ತ ನೋಡಿ ನಗುತ್ತಾನೆ
ಅರ್ಥವಾಗದೇ ಸುಮ್ಮನೆ ಕೂತೆ
ಎಲ್ಲರು ಅವರವರ ವ್ಯವಹಾರದಲ್ಲಿದಾರೆ
ಮರ ಮಾತ್ರ ಸುಮ್ಮನೆ ನಿಂತಿದೆ ,ಕೂತಿದ್ದೇವೆ ನಾವು ಅದೇ ನೆರಳಲ್ಲಿ ...
ಎಲೆ ಉದುರುತ್ತಲೇ ಇವೆ

ತಿರಸ್ಕೃತ